ಮಾಯವಾಗಿದೆ ಮನಸು

ಹಾಗೆ ಸುಮ್ಮನೆ
ಸೋನು ನಿಗಮ್
ಜಯಂತ್ ಕಾಯ್ಕಿಣಿ
ಮನೋ ಮೂರ್ತಿ

ಮಾಯವಾಗಿದೆ ಮನಸು ಹಾಗೆ ಸುಮ್ಮನೆ

ಗಾಯವ ಮಾಡಿದೆ ಕನಸು ಹಾಗೆ ಸುಮ್ಮನೆ

ಮೋಹದಲ್ಲಿ ಬೀಳುವ ಮಧುರವಾದ ಭಾವನೆ

ಈಗ ತಾನೇ ಬಂದಿದೆ ನೀಡದೆ ಸೂಚನೆ || ಪ ||

ತುಂಬಿ ಹೋಯಿತೀಗಲೇ ನನ್ನ ದಿನಚರಿ

ಎಲ್ಲ ಪುಟದಲು ಅವಳದೇ ವೈಖರಿ

ಅವಳ ನಿಲುವುಗನ್ನಡಿ ಪುಣ್ಯ ಮಾಡಿದೆ

ರೂಪ ತಾಳಿ ನಿಂತಿದೆ ನನ್ನದೇ ಕಲ್ಪನೆ || ೨ ||

ನನ್ನ ಹಾಡಿನಲ್ಲಿದೆ ಅವಳ ಸಂಗತಿ

ಜಾಹಿರಾಗಲಿ ಜೀವದ ಮಾಹಿತಿ

ಎಲ್ಲೆ ಹೊರಟು ನಿಂತರು ಅಲ್ಲೇ ತಲುಪುವೆ

ಜಾಸ್ತಿ ಹೇಳಲಾರೆನು ಖಾಸಗಿ ಯೋಚನೆ || ೨ ||

ಜಾಹೀರಾತು ಅವಕಾಶ

ಸಿನಿಮಾ & ಸಂಗೀತಾಸಕ್ತರಿಗೆ ನಿಮ್ಮ ಬ್ರ್ಯಾಂಡ್ ತಲುಪಿಸಿ

ಕನ್ನಡ ನುಡಿ ಡಿಜಿಟಲ್ ಜಾಹೀರಾತು

ಸಂಪರ್ಕಿಸಿ

ಹಾಗೆ ಸುಮ್ಮನೆ

2008

ಚಿತ್ರ ನೋಡಿ
ಜಾಹೀರಾತು ಅವಕಾಶ

ಸಿನಿಮಾ ಪ್ರೇಮಿಗಳು & ಗೀತಾಸಕ್ತರಿಗೆ ನಿಮ್ಮ ಉತ್ಪನ್ನ ತಲುಪಿಸಿ

ಕನ್ನಡ ನುಡಿ ಜಾಹೀರಾತು ಸೇವೆ